ಬೆಂಗಳೂರು: ಸತತ ಮೂರು ಗೆಲುವು ಸಾಧಿಸಿ ಬೀಗುತ್ತಿರುವ ಕರ್ನಾಟಕ ತಂಡ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ನ.9 ರಿಂದ ನಾಲ್ಕನೇ ಪಂದ್ಯವಾಡಲು ಸಜ್ಜಾಗಿದೆ. ನಗರದ ಹೊರವಲಯದಲ್ಲಿರುವ ಆಲೂರು ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಜ್ಯ ತಂಡ ದೆಹಲಿ ತಂಡದ ವಿರುದ್ಧ ಸೆಣಸಲಿದೆ. ಈಗಾಗಲೇ ಗೆಲುವಿನ ಹುಮ್ಮಸ್ಸಿನಲ್ಲಿರುವ ವಿನಯ್ ಕುಮಾರ್ ನೇತೃತ್ವದ ಬಳಗಕ್ಕೆ ರಾಷ್ಟ್ರೀಯ ತಂಡದ ಆಟಗಾರರಾದ ಕೆಎಲ್ ರಾಹುಲ್ ಮತ್ತು ಮನೀಶ್ ಪಾಂಡೆ ವಾಪಸಾತಿ ಬೂಸ್ಟ್ ಸಿಕ್ಕಿದಂತಾಗಿದೆ.ನ್ಯೂಜಿಲೆಂಡ್ ಸರಣಿ ಮುಗಿಸಿ ಇವರಿಬ್ಬರೂ