ಬೆಂಗಳೂರು: ರಾಜ್ಯ ಕ್ರಿಕೆಟ್ ತಂಡದ ನಾಯಕ ಕರುಣ್ ನಾಯರ್ ತಮ್ಮ ಬಹುಕಾಲದ ಗೆಳತಿ ಸನಯ ಟಕರಿ ಜತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ರಣಜಿ ಪಂದ್ಯದಲ್ಲಿ ರಾಜ್ಯ ತಂಡವನ್ನು ಮುನ್ನಡೆಸಿದ್ದ ಕರುಣ್ ವಿವಾಹ ನಿಮಿತ್ತವಾಗಿ ಜನವರಿ 11 ರಂದು ನಡೆಯಲಿರುವ ರಣಜಿ ಪಂದ್ಯಕ್ಕೆ ಗೈರಾಗಲಿದ್ದಾರೆ.ಕರುಣ್ ಅನುಪಸ್ಥಿತಿಯಲ್ಲಿ ರಾಜ್ಯ ತಂಡದ ನೇತೃತ್ವವನ್ನು ಶ್ರೇಯಸ್ ಗೋಪಾಲ್ ವಹಿಸಲಿದ್ದಾರೆ. ಈಗಾಗಲೇ ರಾಷ್ಟ್ರೀಯ ತಂಡ ಪ್ರತಿನಿಧಿಸುತ್ತಿರುವ ಕಾರಣ ಕೆಎಲ್ ರಾಹುಲ್, ಮನೀಶ್ ಪಾಂಡೆ