ಬೆಂಗಳೂರು: ಸೆಪ್ಟೆಂಬರ್ 8 ಮತ್ತು 9 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ಆನ್ ಲೈನ್ ಮೂಲಕವೇ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.ಕಿಚ್ಚ ಸುದೀಪ್ ಸಾರಥ್ಯದ ಟೂರ್ನಿಯಲ್ಲಿ ಸ್ಯಾಂಡಲ್ ವುಡ್ ನ ಎಲ್ಲಾ ಸ್ಟಾರ್ ಗಳಲ್ಲದೇ ಮಾಜಿ ಅಂತಾರಾಷ್ಟ್ರೀಯ ಆಟಗಾರರಾದ ವೀರೇಂದ್ರ ಸೆಹ್ವಾಗ್, ತಿಲಕರತ್ನೆ ದಿಲ್ಶಾನ್, ಹರ್ಷಲ್ ಗಿಬ್ಸ್ ಮುಂತಾದವರೂ ಆಡುತ್ತಿದ್ದಾರೆ.ಎರಡು ದಿನಗಳಲ್ಲಿ ಆರು ಪಂದ್ಯಗಳು ಮತ್ತು ಫೈನಲ್ ನಡೆಯಲಿದ್ದು, ಜತೆಗೆ ಚಿತ್ರತಾರೆಯರಿಂದ ಮನರಂಜನೆ