ಮುಂಬೈ: ಐಪಿಎಲ್ ನಲ್ಲಿ ಗಾಯಗೊಂಡಿದ್ದರಿಂದ ಈ ಬಾರಿ ವಿಶ್ವಕಪ್ ಆಡುವುದೇ ಅನುಮಾನ ಎಂತಿದ್ದ ಆಲ್ ರೌಂಡರ್ ಕೇದಾರ್ ಜಾಧವ್ ಕೊನೆಗೂ ಫಿಟ್ ಆಗಿದ್ದಾರೆ.ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಆಡುವ ಜಾಧವ್ ಭುಜದ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಅವರು ಮೇ 23 ರೊಳಗೆ ಫಿಟ್ ಆಗದೇ ಇದ್ದರೆ ಈ ಬಾರಿ ವಿಶ್ವಕಪ್ ನಿಂದ ಹೊರಹೋಗಬೇಕಾಗಿತ್ತು.ಆದರೆ ತಕ್ಕ ಸಮಯದಲ್ಲೇ ಫಿಟ್ ಆಗಿರುವ ಜಾಧವ್ ವಿಶ್ವಕಪ್ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಟೀಂ ಇಂಡಿಯಾ