ವಿಜಯ್ ಶಂಕರ್ ಗೆ ಕೊಕ್ ಕೊಡಿ ಎಂದು ರವಿಶಾಸ್ತ್ರಿ, ವಿರಾಟ್ ಕೊಹ್ಲಿಗೆ ಮನವಿ ಮಾಡಿದ ಕೆವಿನ್ ಪೀಟರ್ಸನ್

ಲಂಡನ್, ಭಾನುವಾರ, 30 ಜೂನ್ 2019 (09:28 IST)

ಲಂಡನ್: ಟೀಂ ಇಂಡಿಯಾದಲ್ಲಿ ಇದೀಗ ಕಳಪೆ ಪ್ರದರ್ಶನದಿಂದಾಗಿ ಆಲ್ ರೌಂಡರ್ ವಿಜಯ್ ಶಂಕರ್ ಸಾಕಷ್ಟು ಟೀಕೆಗೊಳಗಾಗುತ್ತಿದ್ದಾರೆ.


 
ಕಳೆದ ಎರಡೂ ಪಂದ್ಯಗಳಲ್ಲಿ ಅವರು ಬ್ಯಾಟ್ ಅಥವಾ ಬೌಲಿಂಗ್ ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಇದರಿಂದಾಗಿ ಭಾರತದ ಮಧ್ಯಮ ಕ್ರಮಾಂಕ ಪೇಲವವಾಗಿದೆ. ಇದೀಗ ವಿಜಯ್ ರನ್ನು ಕೈ ಬಿಡಲು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಮನವಿ ಮಾಡಿದ್ದಾರೆ.
 
ರವಿಶಾಸ್ತ್ರಿ ಮತ್ತು ಕೊಹ್ಲಿಗೆ ಟ್ವೀಟ್ ಮೂಲಕ ಮನವಿ ಮಾಡಿರುವ ಪೀಟರ್ಸನ್ ದಯವಿಟ್ಟು ವಿಜಯ್ ಶಂಕರ್ ರನ್ನು ತಂಡದಿಂದ ಕೈಬಿಡಿ ಎಂದಿದ್ದಾರೆ. ಇದೀಗ ಭಾರತದಲ್ಲೂ ವಿಜಯ್ ಶಂಕರ್ ಪ್ರದರ್ಶನದ ಬಗ್ಗೆ ಟೀಕೆ ಕೇಳಿಬರುತ್ತಿದ್ದು, ಅವರ ಬದಲು ದಿನೇಶ್ ಕಾರ್ತಿಕ್‍ ಅಥವಾ ರಿಷಬ್ ಪಂತ್ ಗೆ ಅವಕಾಶ ನೀಡಲು ಒತ್ತಾಯ ಮಾಡಲಾಗುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಸುನಿಲ್ ಶೆಟ್ಟಿ ಪುತ್ರಿ ಜತೆಗೆ ಕೆಲ್ ರಾಹುಲ್ ಲವ್?

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಹೆಸರು ಈಗ ಮತ್ತೊಬ್ಬ ನಟಿ ಜತೆ ಕೇಳಿಬರುತ್ತಿದೆ. ಆಂಗ್ಲ ...

news

ವಿಶ್ವಕಪ್ 2019: ಟೀಂ ಇಂಡಿಯಾ ಆಡುವ ಪಂದ್ಯಗಳು ಭಾನುವಾರವೇ ಏಕೆ?

ಲಂಡನ್: ವಿಶ್ವಕಪ್ ಇರಲಿ, ಪ್ರಮುಖ ಐಸಿಸಿ ಟೂರ್ನಿಗಳು ಯಾವುದೇ ಇರಲಿ, ಟೀಂ ಇಂಡಿಯಾ ಆಡುವ ಪಂದ್ಯಗಳನ್ನು ...

news

ವಿಶ್ವಕಪ್ 2019: ಇಂದು ಟೀಂ ಇಂಡಿಯಾದ ಗೆಲುವಿನ ಮೇಲೆ ಮೂರು ತಂಡಗಳ ಭವಿಷ್ಯ ನಿಂತಿದೆ!

ಲಂಡನ್: ವಿಶ್ವಕಪ್ ಕೂಟದಲ್ಲಿ ಇಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ಮಹತ್ವದ ಪಂದ್ಯ ನಡೆಯಲಿದ್ದು, ಇಂದು ...

news

ಯಾರು ಏನೇ ಹೇಳಲಿ, ಟೀಂ ಇಂಡಿಯಾ ನಾಳೆ ಕಿತ್ತಳೆ ಜೆರ್ಸಿ ತೊಡುವುದು ಪಕ್ಕಾ

ಲಂಡನ್: ಇಂಗ್ಲೆಂಡ್ ವಿರುದ್ಧ ನಾಳೆ ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಕಿತ್ತಳೆ ಬಣ್ಣದ ...