ಕೊಲೊಂಬೊ: ಯಾವುದೇ ಬ್ಯಾಟ್ಸ್ ಮನ್ ಆದರೂ ಕೆಲವು ನಿರ್ದಿಷ್ಟ ಸ್ಥಾನದಲ್ಲಿ ಆಡಿದರಷ್ಟೇ ಯಶಸ್ಸು ಸಾಧ್ಯ. ಅದು ಈಗ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೂ ಅನುಭವವಾಗುತ್ತಿದೆ. ರಾಹುಲ್ ಹೇಳಿ ಕೇಳಿ ಹೊಸ ಚೆಂಡಿನೊಂದಿಗೆ ಚೆನ್ನಾಗಿ ಆಡಬಲ್ಲ ಕ್ರಿಕೆಟಿಗ. ಹೀಗಾಗಿಯೇ ಅವರು ಆರಂಭಿಕರಾಗಿ ಸಾಕಷ್ಟು ಯಶಸ್ವಿಯಾಗಿದ್ದಾರೆ. ಹಳೇ ಚೆಂಡಿನೊಂದಿಗೆ ಅವರ ದಾಖಲೆ ಉತ್ತಮವಾಗಿಲ್ಲ.ಆದರೆ ಅನಿವಾರ್ಯ ನೋಡಿ. ಸದ್ಯಕ್ಕೆ ಭಾರತ ತಂಡದಲ್ಲಿ ಆರಂಭಿಕ ಸ್ಥಾನಕ್ಕಿರುವಷ್ಟು ಪೈಪೋಟಿ ಇನ್ಯಾವುದಕ್ಕೂ ಇಲ್ಲ. ಶಿಖರ್