ಸಿಡ್ನಿ: ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೆ ಆಸ್ಟ್ರೇಲಿಯಾದಲ್ಲಿ ಆಡುವುದು ಎಂದರೆ ವಿಶೇಷವೇ. ಯಾಕೆಂದರೆ 2014 ರಲ್ಲಿ ಇದೇ ಆಸ್ಟ್ರೇಲಿಯಾದ ಮೆಲ್ಬೋರ್ನ್ ಅಂಗಣದಲ್ಲಿ ರಾಹುಲ್ ಮೊದಲ ಬಾರಿಗೆ ಟೆಸ್ಟ್ ಪಂದ್ಯವಾಡಿದ್ದರು. ಇಂದು ಮತ್ತೆ ರಾಹುಲ್ ಟೆಸ್ಟ್ ತಂಡಕ್ಕೆ ವಾಪಸಾತಿ ಮಾಡಲು ಅದೇ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ವೇದಿಕೆ ಮಾಡಿಕೊಂಡಿದ್ದಾರೆ. ಕಳಪೆ ಫಾರ್ಮ್ ನಿಂದಾಗಿ ಟೆಸ್ಟ್ ತಂಡದಿಂದ ಹೊರಬಿದ್ದಿದ್ದ ರಾಹುಲ್ ಗೆ ಈಗ ಟೆಸ್ಟ್ ತಂಡಕ್ಕೆ ಮರಳುವ ಅದೃಷ್ಟ ಸಿಕ್ಕಿದೆ.