Widgets Magazine

ಪತ್ರಿಕಾಗೋಷ್ಠಿಯಲ್ಲಿ ಸಿಟ್ಟಿಗೆದ್ದ ಕೆಎಲ್ ರಾಹುಲ್! ಕಾರಣವೇನು?

ಕಟಕ್| Krishnaveni| Last Modified ಶುಕ್ರವಾರ, 22 ಡಿಸೆಂಬರ್ 2017 (08:54 IST)
ಕಟಕ್: ಕೆಎಲ್ ರಾಹುಲ್ ಸಾಮಾನ್ಯವಾಗಿ ಸಿಟ್ಟಿಗೇಳುವುದು ಕಡಿಮೆ. ಅವರು ಯಾವತ್ತೂ ತಮ್ಮ ಭಾವನೆಗಳನ್ನು ಹೊರಹಾಕಿದವರಲ್ಲ. ಆದರೆ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿಟ್ಟಿಗೆದ್ದಿದ್ದಾರೆ.


ಅಷ್ಟಕ್ಕೂ ರಾಹುಲ್ ಸಿಟ್ಟಿಗೇಳಲು ಕಾರಣವೇನು ಗೊತ್ತಾ? ಧೋನಿ ಫಾರ್ಮ್ ಬಗ್ಗೆ ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದ್ದಕ್ಕೆ ರಾಹುಲ್ ಕೆರಳಿದರು.


‘ನೀವು ಯಾವ ಫಾರ್ಮ್ ಬಗ್ಗೆ ಕೇಳುತ್ತಿದ್ದೀರಿ? ನಾನು ಪ್ರತೀ ಬಾರಿ ಅವರ ಜತೆ ಆಡುವಾಗಲೂ ಅವರು ತಂಡಕ್ಕಾಗಿ ಉತ್ತಮ ರನ್ ಕಲೆ ಹಾಕಿದ್ದಾರೆ. ನಾವೆಲ್ಲಾ ಏನಾದರೂ ಸಲಹೆ ಬೇಕಾದರೆ ಮೊದಲು ನೋಡುವುದೇ ಧೋನಿ ಕಡೆಗೆ. ಪ್ರತೀ ಪಂದ್ಯದಲ್ಲೂ ಅವರು ಅತ್ಯುತ್ತಮ ಕೊಡುಗೆ ನೀಡುತ್ತಿದ್ದಾರೆ. ಇನ್ನೇನು ಬೇಕು ನಿಮಗೆ?’
ಎಂದು ಕೋಪದಿಂದಲೇ ಕೇಳಿದರು.


ಧೋನಿ ಮತ್ತು ರಾಹುಲ್ ಕಳೆದ ಪಂದ್ಯದಲ್ಲಿ ಭಾರತದ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಧೋನಿ 38 ರನ್ ಗಳಿಸಿದ್ದರೆ ರಾಹುಲ್ 61 ರನ್ ಗಳಿಸಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :