ಬೆಂಗಳೂರು: ಟೀಂ ಇಂಡಿಯಾದಲ್ಲಿ ಧೋನಿ ಉತ್ತರಾಧಿಕಾರಿ ಎಂದೇ ಗುರುತಿಸಿಕೊಂಡಿದ್ದ ರಿಷಬ್ ಪಂತ್ ವಿಕೆಟ್ ಕೀಪರ್ ಆಗಿ ಕಳಪೆ ಪ್ರದರ್ಶನ ನಡುವೆಯೇ ಗಾಯಗೊಂಡು ತಂಡದಿಂದ ಹೊರನಡೆದಾಗ ಹಂಗಾಮಿ ಕೀಪರ್ ಆಗಿ ಬಂದವರು ಕೆಎಲ್ ರಾಹುಲ್.ಇದೀಗ ಕೆಎಲ್ ರಾಹುಲ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಆಗಿ ಕ್ಲಿಕ್ ಆಗಿರುವುದರಿಂದ ಸದ್ಯಕ್ಕೆ ಅವರಿಗೆ ಈ ಡಬಲ್ ರೋಲ್ ಖಾಯಂ ಆಗುವ ಸೂಚನೆ ಸಿಕ್ಕಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲುವಿನ ಬಳಿಕ ಮಾತನಾಡಿರುವ ನಾಯಕ ಕೊಹ್ಲಿ