Widgets Magazine

ಫಸ್ಟ್ ಟೈಮ್ ಟೀಂ ಇಂಡಿಯಾಗೆ ನಾಯಕನಾದ ಕೆಎಲ್ ರಾಹುಲ್

ಬೇ ಓವಲ್| Krishnaveni K| Last Modified ಸೋಮವಾರ, 3 ಫೆಬ್ರವರಿ 2020 (09:34 IST)
ಬೇ ಓವಲ್: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕತ್ವ ವಹಿಸುವ ಸುವರ್ಣಾವಕಾಶ ಕೆಎಲ್ ರಾಹುಲ್ ಪಾಲಿಗೆ ಬಂದಿತ್ತು. ಅದನ್ನು ಅವರು ಯಶಸ್ವಿಯಾಗಿ ನಿಭಾಯಿಸಿದರು ಎನ್ನುವುದು ವಿಶೇಷ.
 

ವಿರಾಟ್ ಕೊಹ್ಲಿ ಈ ಪಂದ್ಯದಿಂದ ಹೊರಗುಳಿದಿದ್ದರು. ಅವರ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ನಾಯಕತ್ವ ವಹಿಸಿದ್ದರು. ಆದರೆ ರೋಹಿತ್ ಬ್ಯಾಟಿಂಗ್ ಸಂದರ್ಭದಲ್ಲಿ ಗಾಯಗೊಂಡಿದ್ದರಿಂದ ಫೀಲ್ಡಿಂಗಿಗ್ ಬರಲಿಲ್ಲ. ಹೀಗಾಗಿ ಟೀಂ ಇಂಡಿಯಾ ನಾಯಕತ್ವ ಕೆಎಲ್ ರಾಹುಲ್ ರದ್ದಾಯಿತು.
 
ವಿಕೆಟ್ ಕೀಪರ್ ಆಗಿ ಹೆಚ್ಚುವರಿ ಹೊಣೆ ಹೊತ್ತಿಕೊಂಡಿರುವ ರಾಹುಲ್ ಗೆ ನಿನ್ನೆಯದ್ದು ವಿಶೇಷ ಅನುಭವವಾಗಿತ್ತು. ನಮ್ಮ ದೇಶದ ತಂಡವನ್ನು ಮುನ್ನಡೆಸುವುದು ಯಾವತ್ತೂ ವಿಶೇಷ. ಇದು ನನಗೆ ವಿಶೇಷ ಅನುಭವ ಕೊಟ್ಟಿತು ಎಂದು ಪಂದ್ಯದ ನಂತರ ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :