ಟಿ20 ಕ್ರಿಕೆಟ್ ನಲ್ಲಿ ಕೊಹ್ಲಿಯನ್ನೇ ಮೀರಿಸಲಿರುವ ಕೆಎಲ್ ರಾಹುಲ್

ಫ್ಲೋರಿಡಾ| Krishnaveni K| Last Modified ಶನಿವಾರ, 3 ಆಗಸ್ಟ್ 2019 (11:02 IST)
ಫ್ಲೋರಿಡಾ: ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಟಿ20 ಕ್ರಿಕೆಟ್ ಮಾದರಿಯಲ್ಲಿ ವಿಶ್ವದಲ್ಲೇ ಶ್ರೇಷ್ಠ ಆಟಗಾರ ಎಂಬುದಕ್ಕೆ ಅವರ ಅಂಕಿ ಅಂಶಗಳೇ ಸಾಕ್ಷಿ. ಇದೀಗ ರಾಹುಲ್ ಹೊಸ ದಾಖಲೆಯೊಂದನ್ನು ಬರೆಯಲು ಸಜ್ಜಾಗಿದ್ದಾರೆ.

 
ಒಂದು ವೇಳೆ ರಾಹುಲ್ ವಿಂಡೀಸ್ ವಿರುದ್ಧದ ಈ ಸರಣಿಯಲ್ಲಿ 121 ರನ್ ಗಳಿಸಿದರೆ ಟಿ20 ಕ್ರಿಕೆಟ್‍ ನಲ್ಲಿ ಅತೀ ವೇಗವಾಗಿ 1000 ರನ್ ಗಳಿಸಿದ ದಾಖಲೆ ಮಾಡಲಿದ್ದಾರೆ. ಸದ್ಯಕ್ಕೆ ಪಾಕಿಸ್ತಾನದ ಬಾಬರ್ ಅಜಮ್ 26 ಇನಿಂಗ್ಸ್ ಗಳಲ್ಲಿ ಈ ದಾಖಲೆ ಮಾಡಿ ನಂ.1 ಸ್ಥಾನದಲ್ಲಿದ್ದರೆ ವಿರಾಟ್ ಕೊಹ್ಲಿ 27 ಇನಿಂಗ್ಸ್ ಗಳಿಂದ 1000 ರನ್ ಪೂರ್ತಿ ಮಾಡಿ ಎರಡನೇ ಸ್ಥಾನದಲ್ಲಿದ್ದಾರೆ.
 
ರಾಹುಲ್ ಈ ಸರಣಿಯ ಎಲ್ಲಾ ಪಂದ್ಯಗಳನ್ನು ಆಡಿ 121 ರನ್ ಗಳಿಸಿದರೂ ಇಬ್ಬರ ದಾಖಲೆಯನ್ನು ಮುರಿಯಬಹುದಾಗಿದೆ. ಈ ದಾಖಲೆ ಮಾಡಿದರೆ ರಾಹುಲ್ 25 ಇನಿಂಗ್ಸ್ ಗಳಲ್ಲಿ 1000 ರನ್ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :