ಸಿಡ್ನಿ: ಏಕದಿನ ಸರಣಿ ಸೋತ ಮೇಲೆ ಟೀಂ ಇಂಡಿಯಾ ಕ್ರಿಕೆಟಿಗರ ಮೇಲೆ ಅಭಿಮಾನಿಗಳಿಗೆ ತೀವ್ರ ಸಿಟ್ಟಿದೆ. ಅದರ ನಡುವೆಯೇ ಕೆಎಲ್ ರಾಹುಲ್ ನೀಡಿದ ಹೇಳಿಕೆಯೊಂದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸೋಲಿನ ಬಳಿಕ ಸಾಬೂಬು ಹೇಳುವುದು ಮಾಮೂಲು. ಆದರೆ ರಾಹುಲ್ ಎದುರಾಳಿ ತಂಡದ ಆಟಗಾರ ಡೇವಿಡ್ ವಾರ್ನರ್ ಗಾಯಾಳುವಾಗಿದ್ದು ಭಾರತಕ್ಕೆ ಶುಭ ಸುದ್ದಿ ಎಂದು ಜೋಕ್ ಮಾಡಿದ್ದಾರೆ. ಈ ಜೋಕ್ ಅಭಿಮಾನಿಗಳಿಗೆ ಸ್ವಲ್ಪವೂ ಇಷ್ಟವಾಗಲ್ಲ. ಇದು ವೃತ್ತಿಪರತೆ ಸೂಚಿಸಲ್ಲ. ಗೆಲ್ಲಬೇಕೆಂದರೆ ಎದುರಾಳಿ