ಮುಂಬೈ: ಟೀಂ ಇಂಡಿಯಾದಲ್ಲಿ ಏಕದಿನ ಪಂದ್ಯಗಳಲ್ಲಿ ಅವಕಾಶ ವಂಚಿತರಾಗಿರುವ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಈಗ ಟೆಸ್ಟ್ ಪಂದ್ಯದಲ್ಲೂ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ-ಶಿಖರ್ ಧವನ್ ಜೋಡಿ ಕ್ಲಿಕ್ ಆಗುವುದರೊಂದಿಗೆ ಆರಂಭಿಕ ಸ್ಥಾನ ಸಿಗದೇ ಮಧ್ಯಮ ಕ್ರಮಾಂಕದಲ್ಲಿ ಕೆಲವು ಪಂದ್ಯ ಆಡಿದ್ದ ಕೆಎಲ್ ರಾಹುಲ್ ರನ್ನು ನಿರೀಕ್ಷಿತ ಪ್ರದರ್ಶನ ಬಾರದ ಹಿನ್ನಲೆಯಲ್ಲಿ ಆಡುವ ಬಳಗದಿಂದಲೇ ಹೊರಗಿಡಲಾಯಿತು.ಆದರೆ ಟೆಸ್ಟ್ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಖಾಯಂ ಓಪನರ್ ಆಗಿದ್ದರು.