Widgets Magazine

ಕೆಎಲ್ ರಾಹುಲ್ ದ್ವಿಪಾತ್ರಾಭಿನಯಕ್ಕೆ ಇಂದು ರೆಸ್ಟ್?

ವೆಲ್ಲಿಂಗ್ಟನ್| Krishnaveni K| Last Modified ಶುಕ್ರವಾರ, 31 ಜನವರಿ 2020 (10:01 IST)
ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ನಡೆಯಲಿರುವ ಟಿ20 ಪಂದ್ಯದಲ್ಲಿ ಇದುವರೆಗೆ ಅವಕಾಶ ನೀಡದ ಆಟಗಾರರಿಗೆ ಅವಕಾಶ ನೀಡಲು ಕೊಹ್ಲಿ ನಿರ್ಧರಿಸಿದ್ದಾರೆ. ಹೀಗಾಗಿ ಇಂದು ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್ ಅವಕಾಶ ಪಡೆದರೂ ಅಚ್ಚರಿಯಿಲ್ಲ.

 
ಒಂದು ವೇಳೆ ಸಂಜು ಅವಕಾಶ ಪಡೆದರೆ ಕೆಎಲ್ ರಾಹುಲ್ ಗೆ ವಿಕೆಟ್ ಕೀಪಿಂಗ್ ನಿಂದ ವಿಶ್ರಾಂತಿ ಸಿಗುವ ಸಾಧ್ಯತೆಯಿದೆ. ಕಳೆದ ಕೆಲವು ಪಂದ್ಯಗಳಿಂದ ರಾಹುಲ್ ಕೀಪಿಂಗ್ ಮತ್ತು ಆರಂಭಿಕನಾಗಿ ಜವಾಬ್ಧಾರಿಯುತವಾಗಿ ಆಡುತ್ತಿದ್ದಾರೆ.
 
ಕಳೆದ ಪಂದ್ಯದಲ್ಲಂತೂ ಕೊನೆಗೆ ಸೂಪರ್ ಓವರ್ ನಲ್ಲಿಯೂ ಒತ್ತಡ ನಿಭಾಯಿಸಬೇಕಾಗಿತ್ತು. ರಾಹುಲ್ ಪ್ರದರ್ಶನಕ್ಕೆ ಅಭಿಮಾನಿಗಳು ಈಗಾಗಲೇ ಫಿದಾ ಆಗಿದ್ದಾರೆ. ಆದರೆ ಅವರಿಗೆ ಈ ಔಪಚಾರಿಕ ಪಂದ್ಯಗಳಿಂದ ವಿಶ್ರಾಂತಿ ನೀಡಿದರೂ ಅಚ್ಚರಿಯಿಲ್ಲ.
ಇದರಲ್ಲಿ ಇನ್ನಷ್ಟು ಓದಿ :