ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧ ಏಕದಿನ ಮತ್ತು ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಕರ್ನಾಟಕ ಮೂಲದ ಕ್ರಿಕೆಟಿಗರಾದ ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ನಡುವಿನ ಸ್ನೇಹ ಎಂತಹದ್ದು ಎಂದು ಎಲ್ಲರಿಗೂ ಗೊತ್ತು. ಈ ಗೆಳೆಯರು ಜತೆಗೇ ಕ್ರಿಕೆಟ್ ಆಡುವ ಅವಕಾಶ ಸಿಕ್ಕ ಮೇಲೆ ಕೇಳಬೇಕೆ? ಇಬ್ಬರೂ ಜತೆಯಾಗಿರುವ ಅವಕಾಶವನ್ನು ರಾಹುಲ್ ಮತ್ತು ಮಯಾಂಕ್ ಚೆನ್ನಾಗಿಯೇ ಬಳಸಿಕೊಂಡಿದ್ದಾರೆ.ಎರಡನೇ ಏಕದಿನಕ್ಕೆ ಮೊದಲು ಸಿಕ್ಕ ಬಿಡುವಿನ ವೇಳೆಯಲ್ಲಿ ಮಯಾಂಕ್ ಜತೆ ಹೊರಗಡೆ ಸುತ್ತಾಟ ನಡೆಸಿರುವ