ಬೆಂಗಳೂರು: ಕೊರೋನಾದಿಂದಾಗಿ ಕ್ರಿಕೆಟ್ ಮೈದಾನಕ್ಕಿಳಿಯದೇ ಕ್ರಿಕೆಟಿಗರಿಗೆಲ್ಲಾ ತಮ್ಮ ಜೀವನದ ಬಹು ಮುಖ್ಯ ಅಂಗವೇ ಕಳೆದುಕೊಂಡಂತಾಗಿದೆ. ಬಹುಶಃ ಇಷ್ಟು ಸುದೀರ್ಘ ಬಿಡುವು ಇದುವರೆಗೆ ಕ್ರಿಕೆಟಿಗರಿಗೆ ಸಿಕ್ಕಿಲ್ಲ.ಈ ನಡುವೆ ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ತಮ್ಮ ಹೆಲ್ಮೆಟ್, ಬ್ಯಾಟ್, ಸೇರಿದಂತೆ ಕ್ರಿಕೆಟ್ ಪರಿಕರಗಳನ್ನು ಹರವಿಕೊಂಡು ಅದರ ಮುಂದೆ ಕುಳಿತು ಐ ಮಿಸ್ ಯೂ ಎಂದು ಭಾವುಕರಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.ಈ ಹಿಂದೆ ಕೊಹ್ಲಿ, ರೋಹಿತ್ ಶರ್ಮಾ ಕೂಡಾ ಕ್ರಿಕೆಟ್ ಮಿಸ್ ಮಾಡಿಕೊಳ್ಳುತ್ತಿರುವುದಾಗಿ