ಬೆಂಗಳೂರು: ಟೀಂ ಇಂಡಿಯಾ ಸೀಮಿತ ಓವರ್ ಗಳ ಪಂದ್ಯದಲ್ಲಿ ವಿಕೆಟ್ ಕೀಪರ್ ಆಗಿ ಕ್ಲಿಕ್ ಆಗಿರುವ ಕೆಎಲ್ ರಾಹುಲ್ ಆಡುವಾಗ ತಮಗೆ ಎದುರಾಗುವ ಸವಾಲುಗಳ ಬಗ್ಗೆ ಹೇಳಿಕೊಂಡಿದ್ದಾರೆ.ಅದರಲ್ಲೂ ಟೀಂ ಇಂಡಿಯಾದಲ್ಲಿ ಯಾರೇ ಕೀಪಿಂಗ್ ಮಾಡಿದರೂ ಇತ್ತೀಚೆಗೆ ಅವರನ್ನು ಧೋನಿಗೆ ಹೋಲಿಸಲಾಗುತ್ತಿದೆ. ಮೈದಾನದಲ್ಲಿ ಕ್ಯಾಚ್ ಬಿಟ್ಟರೆ, ಸ್ಟಂಪ್ ಅವಕಾಶ ಕೈಚೆಲ್ಲಿದರೆ ಧೋನಿ ಹೆಸರೆತ್ತಿ ಪ್ರೇಕ್ಷಕರು ಕಿಚಾಯಿಸುತ್ತಾರೆ.ಇದುವೇ ತನಗಿರುವ ದೊಡ್ಡ ಸವಾಲು ಎಂದು ರಾಹುಲ್ ಹೇಳಿಕೊಂಡಿದ್ದಾರೆ. ಧೋನಿಗೆ ಹೋಲಿಕೆ ಮಾಡುವುದರಿಂದ ಭಾರತಕ್ಕೆ ಯಾರೇ