Widgets Magazine

ಕೀಪಿಂಗ್ ಗೂ ಸೈ, ಬ್ಯಾಟಿಂಗ್ ಗೂ ಸೈ: ಕೆಎಲ್ ರಾಹುಲ್ ಗೆ ಸಹ ಕ್ರಿಕೆಟಿಗರ ಭರಪೂರ ಮೆಚ್ಚುಗೆ

ರಾಜ್ ಕೋಟ್| Krishnaveni K| Last Modified ಶನಿವಾರ, 18 ಜನವರಿ 2020 (10:07 IST)
ರಾಜ್ ಕೋಟ್: ಟೀಂ ಇಂಡಿಯಾದಲ್ಲಿ ಆರಂಭಿಕ ಸ್ಥಾನ ಸಿಗದೇ ಹೋದರೇನಂತೆ, ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಕೆಎಲ್ ರಾಹುಲ್ ಸಂಪೂರ್ಣ ಯಶಸ್ವಿಯಾಗಿದ್ದಾರೆ.

 
ತಮ್ಮ ಮೆಚ್ಚಿನ ಆರಂಭಿಕ ಸ್ಥಾನ ಸಿಗದೇ ಹೋದರೂ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ರಾಹುಲ್ ಸೈ ಎನಿಸಿಕೊಂಡಿದ್ದಾರೆ. ಐದನೇ ಕ್ರಮಾಂಕದಲ್ಲಿ ಧೋನಿ ಬಳಿಕ ಸಿಡಿಯಬಲ್ಲ ಕ್ರಿಕೆಟಿಗ ಯಾರು ಎಂಬ ಪ್ರಶ್ನೆಗೆ ರಾಹುಲ್ ನಿನ್ನೆಯ ಇನಿಂಗ್ಸ್ ಮೂಲಕ ಉತ್ತರ ನೀಡಿದ್ದಾರೆ.
 
ಅಷ್ಟೇ ಅಲ್ಲದೆ, ರಿಷಬ್ ಪಂತ್ ಗೆ ಗಾಯವಾದ ಹಿನ್ನಲೆಯಲ್ಲಿ ವಿಕೆಟ್ ಕೀಪರ್ ಆಗಿಯೂ ಸೈ ಎನಿಸಿಕೊಂಡಿದ್ದಾರೆ. ತಾನು ಚೆನ್ನಾಗಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದೇನೆ ಎಂದು ಸ್ಪಿನ್ನರ್ ಕುಲದೀಪ್ ಯಾದವ್ ಸರ್ಟಿಫಿಕೇಟ್ ಕೊಟ್ಟಿರುವುದಾಗಿ ರಾಹುಲ್ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಬ್ಯಾಟಿಂಗ್ ನಲ್ಲಿ ಮಿಂಚಿದ್ದಕ್ಕೆ ನಾಯಕ ಕೊಹ್ಲಿಯಿಂದಲೂ ಪ್ರತ್ಯೇಕವಾಗಿ ಹೊಗಳಿಸಿಕೊಂಡಿದ್ದಾರೆ. ಇದರೊಂದಿಗೆ ಭಾರತದ ಸೀಮಿತ ಓವರ್ ಗಳ ಪಂದ್ಯದಲ್ಲಿ ತಮ್ಮ ಸ್ಥಾನ ಗಟ್ಟಿಗೊಳಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :