ಮೈದಾನದಲ್ಲಿ ಆರಂಭವಾದ ಕೆಎಲ್ ರಾಹುಲ್-ನೀಶಾಮ್ ಕಾಳಗ ಟ್ವಿಟರ್ ನಲ್ಲೂ ಮುಂದುವರಿಕೆ!

ಬೇ ಓವಲ್| Krishnaveni K| Last Modified ಗುರುವಾರ, 13 ಫೆಬ್ರವರಿ 2020 (09:24 IST)
ಬೇ ಓವಲ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ಮೈದಾನದಲ್ಲಿ ರನ್ ಕದಿಯುವಾಗ ಅಡ್ಡ ಬಂದ ವಿಚಾರಕ್ಕೆ ಪರಸ್ಪರ ಕಿತ್ತಾಡಿಕೊಂಡಿದ್ದ ಕೆಎಲ್ ರಾಹುಲ್ ಮತ್ತು ಜಿಮ್ಮಿ ನಿಶಾನ್ ಈ ಕಾದಾಟವನ್ನು ಟ್ವಿಟರ್ ನಲ್ಲೂ ಮುಂದುವರಿಸಿದ್ದಾರೆ.
 

ಐಸಿಸಿ ಇವರಿಬ್ಬರ ಕಾದಾಟ ಫೋಟೋ ಹಾಕಿ ಹಾಸ್ಯದ ದಾಟಿಯಲ್ಲಿ ಸಂದೇಶ ಬರೆದಿತ್ತು. ಇದಕ್ಕೆ ನೀಶಾಮ್ ಮಕ್ಕಳು ಆಡುವ ಸ್ಟೋನ್ ಪೇಪರ್ ಸೀಸರ್ ಆಟ ಎಂದು ಪ್ರತಿಕ್ರಿಯಿಸಿ ಹಾಸ್ಯ ಮಾಡಿದ್ದರು.
 
ಇದೀಗ ಕೆಎಲ್ ರಾಹುಲ್ ಕೂಡಾ ಇದಕ್ಕೆ ತಿರುಗೇಟು ಕೊಟ್ಟಿದ್ದು, ‘ಏಪ್ರಿಲ್ ನಲ್ಲಿ ಎಲ್ಲವೂ ಸೆಟ್ಲ್ ಮಾಡೋಣ. ಸ್ವಲ್ಪ ದಿನ ಕಾದಿರು’ ಎಂದು ಕಾಮೆಂಟ್ ಮಾಡಿದ್ದಾರೆ. ಏಪ್ರಿಲ್ ನಲ್ಲಿ ಐಪಿಎಲ್ ಕೂಟ ನಡೆಯಲಿದ್ದು, ಆಗ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂಬರ್ಥದಲ್ಲಿ ರಾಹುಲ್ ಕೂಡಾ ತಮಾಷೆಯಾಗಿ ನಿಶಾಮ್ ಕಾಲೆಳೆದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :