ಅಡಿಲೇಡ್: ಫಾರ್ಮ್ ನಲ್ಲಿಲ್ಲದ ಆಟಗಾರರ ಮೇಲೆ ಆಳಿಗೊಬ್ಬರಂತೆ ಕಲ್ಲೆಸೆಯುವುದು ಹೊಸತಲ್ಲ. ಇದೀಗ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೂ ಅದೇ ಅನುಭವವಾಗಿದೆ.ಸದ್ಯ ಕಳಪೆ ಫಾರ್ಮ್ ನಲ್ಲಿದ್ದರೂ ತಂಡದಲ್ಲಿ ಅವಕಾಶ ಪಡೆಯುತ್ತಿರುವ ರಾಹುಲ್ ಬಗ್ಗೆ ಎಲ್ಲರೂ ಟೀಕೆ ಮಾಡುತ್ತಿದ್ದಾರೆ. ಮಾಜಿ ಕ್ರಿಕೆಟಿಗರು, ತಜ್ಞರು, ಅಭಿಮಾನಿಗಳು ಅಷ್ಟೇ ಏಕೆ, ತಂಡದ ಬ್ಯಾಟಿಂಗ್ ಕೋಚ್ ಕೂಡಾ ರಾಹುಲ್ ಬ್ಯಾಟಿಂಗ್ ವೈಫಲ್ಯವನ್ನು ಟೀಕಿಸುತ್ತಿದ್ದಾರೆ. ಹೀಗಾಗಿ ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸಿರುವ ರಾಹುಲ್ ಮುಂದೆ ಇಂತಹ ತಪ್ಪಾಗದಂತೆ