ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು.ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್, ರೋಹಿತ್ ಶರ್ಮಾ ತಾಳ್ಮೆಯಿಂದ ಆಟ ಶುರು ಮಾಡಿ ಕ್ರೀಸ್ ಗಂಟಿಕೊಂಡ ಬಳಿಕ ದೊಡ್ಡ ಹೊಡೆತಕ್ಕೆ ಕೈ ಹಾಕಿದರು.ಇವರಿಬ್ಬರೂ ಜೊತೆಯಾಗಿ 100 ಪ್ಲಸ್ ರನ್ ಜೊತೆಯಾಟವಾಡುವ ಮೂಲಕ ಹೊಸ ದಾಖಲೆಯೊಂದನ್ನು ಬರೆದರು. 14 ವರ್ಷಗಳ ಬಳಿಕ ಭಾರತಕ್ಕೆ ಏಷ್ಯಾ ಖಂಡದ ಹೊರಗಿನ ಮೈದಾನದಲ್ಲಿ ಉತ್ತಮ ಆರಂಭ ದೊರಕಿತು.