ದುಬೈ: ಐಪಿಎಲ್ 13 ಕ್ಕೆ ದುಬೈಗೆ ತೆರಳಿ ಕ್ವಾರಂಟೈನ್ ಅವಧಿ ಮುಗಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್, ಕೋಚ್ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ನೆಟ್ ಪ್ರಾಕ್ಟೀಸ್ ಶುರು ಮಾಡಿಕೊಂಡಿದ್ದಾರೆ. ಬಹಳ ದಿನಗಳ ನಂತರ ನೆಟ್ ಪ್ರಾಕ್ಟೀಸ್ ಸೆಷನ್ ಗೆ ಮರಳಿರುವುದಾಗಿ ರಾಹುಲ್ ಹೇಳಿಕೊಂಡಿದ್ದು, ದುಬೈನ ಸೆಖೆಗೆ ಹೊಂದಿಕೊಂಡು ಅಭ್ಯಾಸ ಮಾಡುವುದು ಸವಾಲಿನ ಕೆಲಸವಾಗಲಿದೆ ಎಂದಿದ್ದಾರೆ.ಉಳಿದ ತಂಡಗಳೂ ಕ್ವಾರಂಟೈನ್ ಅವಧಿ ಮುಗಿದ ತಕ್ಷಣವೇ ಅಭ್ಯಾಸಕ್ಕೆ ಮರಳಲಿವೆ. ಹಲವು