Widgets Magazine

ರಿಷಬ್ ಪಂತ್ ಆಡ್ತಾರಾ ಎಂದು ಕೇಳಿದ್ದಕ್ಕೆ ಕೆಎಲ್ ರಾಹುಲ್ ಕೊಟ್ಟ ಪ್ರತ್ಯುತ್ತರ ಹೇಗಿತ್ತು ಗೊತ್ತಾ?

ಆಕ್ಲೆಂಡ್| Krishnaveni K| Last Modified ಭಾನುವಾರ, 26 ಜನವರಿ 2020 (09:05 IST)
ಆಕ್ಲೆಂಡ್: ಸೀಮಿತ ಓವರ್ ಗಳ ಪಂದ್ಯಗಳಲ್ಲಿ ರಿಷಬ್ ಪಂತ್ ಕಳಪೆ ಫಾರ್ಮ್, ಗಾಯದ ಸಮಸ್ಯೆಯಿಂದ ಹೊರಗುಳಿಯಬೇಕಾಗಿ ಬಂದಾಗ ಮಿಂಚಿದ್ದು ಕೆಎಲ್ ರಾಹುಲ್. ಸದ್ಯದ ಮಟ್ಟಿಗೆ ರಾಹುಲ್ ಬ್ಯಾಟಿಂಗ್ ಮತ್ತು ಕೀಪಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ರಿಷಬ್ ಪಂತ್ ಗೆ ಅವಕಾಶವಿಲ್ಲವಾಗಿದೆ.

 
ಈ ಬಗ್ಗೆ ಕ್ರಿಕೆಟ್ ವಲಯದಲ್ಲಿ ಚರ್ಚೆಗಳು ಜೋರಾಗಿವೆ. ಬಿಸಿಸಿಐ ಅಧ್ಯಕ್ಷ ಗಂಗೂಲಿಗೂ ಪತ್ರಕರ್ತರು ಇದೇ ಪ್ರಶ್ನೆ ಕೇಳಿದಾಗ ಇದನ್ನು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ನಿರ್ಧರಿಸುತ್ತದೆ ಎಂದಿದ್ದಾರೆ.
 
ಇದೇ ಪ್ರಶ್ನೆಯನ್ನು ಕೆಎಲ್ ರಾಹುಲ್ ಗೇ ಪತ್ರಕರ್ತರೊಬ್ಬರು ಕೇಳಿದ್ದಕ್ಕೆ ಅವರು ಕೊಟ್ಟ ಉತ್ತರವೇನು ಗೊತ್ತಾ? ಸದ್ಯಕ್ಕೆ ರಿಷಬ್ ಪಂತ್ ತಂಡದೊಳಕ್ಕೆ ಬರುವ ಸಾಧ‍್ಯತೆ ಇಲ್ವಾ? ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದಕ್ಕೆ ರಾಹುಲ್ ‘ಇದು ನನ್ನ ನಿರ್ಧಾರವಲ್ಲ, ನಾನು ಇದಕ್ಕೆ ಜವಾಬ್ಧಾರಿಯಲ್ಲ’ ಎಂದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :