ದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ. ಆದರೆ ಶಿಖರ್ ಧವನ್ ವಾಪಸಾತಿಯಿಂದಾಗಿ ಕನ್ನಡಿಗ ಕೆಎಲ್ ರಾಹುಲ್ ಸ್ಥಾನ ಕಳೆದುಕೊಳ್ಳುವಂತಾಗಿದೆ. ಕಳೆದ 12 ಇನಿಂಗ್ಸ್ ಗಳಿಂದ 9 ಅರ್ಧಶತಕ ಗಳಿಸಿ ಅದ್ಭುತ ಫಾರ್ಮ್ ನಲ್ಲಿದ್ದರೂ ರಾಹುಲ್ ರನ್ನು ಕೈ ಬಿಡಲಾಗಿದೆ. ಆದರೆ ಅತ್ತ ಕಳೆದ ಪಂದ್ಯದಲ್ಲಿ ಶತಕ ಭಾರಿಸಿದ ಮುರಳಿ ವಿಜಯ್ ರನ್ನು ಕೈ ಬಿಡಲಾಗದ ಅನಿವಾರ್ಯತೆ ಕೊಹ್ಲಿಯನ್ನು