ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ, ಬಾಂಗ್ಲಾದೇಶದ ನಡುವೆ ತ್ರಿಕೋನ ಟಿ20 ಸರಣಿ ಇಂದಿನಿಂದ ಆರಂಭವಾಗುತ್ತಿದ್ದು, ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಕಣಕ್ಕಿಳಿಯುತ್ತಿದೆ.ಆದರೆ ತಂಡದಲ್ಲಿ ಇನ್ನೂ ಕನ್ನಡಿಗ ಕೆಎಲ್ ರಾಹುಲ್ ಗೆ ಸ್ಥಾನ ಸಿಗುತ್ತದೆಂಬ ಯಾವ ಖಚಿತತೆಯೂ ಇಲ್ಲ. ಟೀಂ ಇಂಡಿಯಾ ವಿರಾಟ್ ಕೊಹ್ಲಿ, ಧೋನಿ ಮುಂತಾದ ಹಿರಿಯ ಆಟಗಾರರ ಉಪಸ್ಥಿತಿಯಲ್ಲಂತೂ ರಾಹುಲ್ ಗೆ ಸ್ಥಾನ ಸಿಗುವ ಛಾನ್ಸ್ ಇರುವುದಿಲ್ಲ.ಆದರೆ ಇವರೆಲ್ಲರ ಅನುಪಸ್ಥಿತಿಯಲ್ಲೂ ರಾಹುಲ್ ಬೆಂಚ್ ಕಾಯಿಸಬೇಕಾದ ಪರಿಸ್ಥಿತಿ ಎದುರಾಗಿದೆ.