Photo Courtesy: facebook ಮಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ, ಕರ್ನಾಟಕ ಮೂಲದ ಕೆಎಲ್ ರಾಹುಲ್ ನಿನ್ನೆ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಅವರಿಗೆ ಉಡುಗೊರೆ ಕೊಟ್ಟು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹರಸಿ ಕಳುಹಿಸಿಕೊಟ್ಟಿದ್ದಾರೆ. ಗಾಯಗೊಂಡು ಸದ್ಯಕ್ಕೆ ಕ್ರಿಕೆಟ್ ನಿಂದ ದೂರವಿರುವ ಕೆಎಲ್ ರಾಹುಲ್ ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಏಷ್ಯಾ ಕಪ್ ವೇಳೆಗೆ ತಂಡಕ್ಕೆ ಮರಳು ಗುರಿ ಹಾಕಿಕೊಂಡಿರುವ ರಾಹುಲ್ ಇದಕ್ಕಾಗಿ ಕಠಿಣ ಪರಿಶ್ರಮ ಪಡುತ್ತಿದ್ದಾರೆ.