ಕೆಎಲ್ ರಾಹುಲ್ ಐಪಿಎಲ್ 14 ರಲ್ಲಿ ಸೆಂಚುರಿ ಗ್ಯಾರಂಟಿ

ದುಬೈ| Krishnaveni K| Last Modified ಮಂಗಳವಾರ, 14 ಸೆಪ್ಟಂಬರ್ 2021 (08:55 IST)
ದುಬೈ: ಯುಎಇನಲ್ಲಿ ನಡೆಯಲಿರುವ ರ ಎರಡನೇ ಭಾಗದಲ್ಲಿ ಕಿಂಗ್ಸ್ ಪಂಜಾಬ್ ನಾಯಕ ಕೆಎಲ್ ರಾಹುಲ್ ರಿಂದ ಎರಡು ಅಥವಾ ಮೂರು ಸೆಂಚುರಿ ಗ್ಯಾರಂಟಿ!
Photo Courtesy: Google

 
ಹೀಗಂತ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಭವಿಷ್ಯ ನುಡಿದಿದ್ದಾರೆ. ರಾಹುಲ್ ಈಗಿರುವ ಸ್ಟ್ರೈಕ್ ರೇಟ್ ನೋಡಿದರೆ ಅವರು ಈ ಐಪಿಎಲ್ ನಲ್ಲಿ ಮೂರು ಸೆಂಚುರಿ ಹೊಡೆಯಬಹುದು ಎಂದಿದ್ದಾರೆ.
 
ಐಪಿಎಲ್ 14 ರ ಮೊದಲ ಭಾಗದಲ್ಲಿ ರಾಹುಲ್ ತಮ್ಮ ತಂಡದ ಬ್ಯಾಟಿಂಗ್ ಬೆನ್ನುಲುಬಾಗಿದ್ದರು. ರಾಹುಲ್ ಈಗಾಗಲೇ ಏಳು ಪಂದ್ಯಗಳಿಂದ 331 ರನ್ ಸಿಡಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧಶತಕ ಸೇರಿದೆ. 2021 ರ ಐಪಿಎಲ್ ನಲ್ಲಿ ಅವರು ಗರಿಷ್ಠ ರನ್ ಸ್ಕೋರರ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :