ಕೊಲೊಂಬೊ: ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಗೆದ್ದ ಮೇಲೆ ಉಳಿದ ಔಪಚಾರಿಕ ಪಂದ್ಯಗಳಿಗೆ ಹೊಸಬರಿಗೆ ಅವಕಾಶ ನೀಡುವುದಾಗಿ ನಾಯಕ ಕೊಹ್ಲಿ ಹೇಳಿದ್ದರು. ಆದರೆ ನಾಲ್ಕನೇ ಪಂದ್ಯದಲ್ಲಿ ಅವರು ಮಾಡಿದ ಒಂದು ಪ್ರಯೋಗ ಚರ್ಚೆಗೆ ಕಾರಣವಾಯ್ತು. ರೋಹಿತ್ ಶರ್ಮಾ ಜತೆಗೆ 200 ರನ್ ಗಳ ಜತೆಯಾಟವಾಡಿ ಕೊಹ್ಲಿ ಔಟಾದರು. ಇದರ ಬೆನ್ನಲ್ಲೇ ನಾಲ್ಕನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಅಥವಾ ಮನೀಶ್ ಪಾಂಡೆ ಕಣಕ್ಕಿಳಿಯಬಹುದು ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು.ಯಾಕೆಂದರೆ ಆಗ ಇನ್ನೂ