Widgets Magazine

ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಕೊಹ್ಲಿ ಸೇರಿದಂತೆ ಕ್ರೀಡಾಪಟುಗಳ ಭಾರೀ ಬೆಂಬಲ

ನವದೆಹಲಿ| Krishnaveni K| Last Modified ಶುಕ್ರವಾರ, 20 ಮಾರ್ಚ್ 2020 (09:44 IST)
ನವದೆಹಲಿ: ಕೊರೋನಾವೈರಸ್ ವ್ಯಾಪಕವಾಗಿ ಹರಡದಂತೆ ಭಾನುವಾರ ಒಂದು ದಿನವಿಡೀ ಜನತಾ ಕರ್ಫ್ಯೂ ಬೆಂಬಲಿಸಲು ಪ್ರಧಾನಿ ಮೋದಿ ನಿನ್ನೆ ನೀಡಿದ್ದ ಕರೆಗೆ ಕ್ರೀಡಾ ಕ್ಷೇತ್ರ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದೆ.

 
ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ರವರೆಗೆ ಜನರು ಮನೆಯಿಂದ ಹೊರಬಾರದೇ ಜನತಾ ಕರ್ಫ್ಯೂ ಏರ್ಪಡಿಸಲು ಪ್ರಧಾನಿ ಕರೆ ನೀಡಿದ್ದರು. ಇದಕ್ಕೆ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಸಾಕ್ಷಿ ಮಲಿಕ್, ಯೋಗೇಶ್ವರ್ ದತ್ ಮುಂತಾದವರು ಪ್ರಧಾನಿ ನಿರ್ಧಾರವನ್ನು ಸ್ವಾಗತಿಸಿದ್ದು ಎಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದ್ದಾರೆ.
 
ಜನತಾ ಕರ್ಪ್ಯೂ ಜತೆಗೆ ಭಾನುವಾರ ಸಂಜೆ 5 ಗಂಟೆಗೆ ತಮ್ಮ ಮನೆ ಬಾಗಿಲಿನಲ್ಲಿ ನಿಂತು ಸಾಮೂಹಿಕವಾಗಿ ಚಪ್ಪಾಳೆ ತಟ್ಟುವ ಮೂಲಕ ಕೊರೋನಾ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :