ಮುಂಬೈ: ಟಿ20 ಮಾದರಿಯಲ್ಲಿ ವಿಫಲರಾಗುತ್ತಿರುವ ಹಿನ್ನಲೆಯಲ್ಲಿ ಧೋನಿ ನಿವೃತ್ತಿ ಪಡೆಯಬೇಕು ಎಂದು ಮಾಜಿ ಕ್ರಿಕೆಟಿಗರು ಸೇರಿದಂತೆ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ನಾಯಕ ವಿರಾಟ್ ಕೊಹ್ಲಿ ಸಿಟ್ಟಿಗೆದ್ದಿದ್ದಾರೆ. ವಿವಿಎಸ್ ಲಕ್ಷ್ಮಣ್ ಮತ್ತು ಅಜಿತ್ ಅಗರ್ಕರ್ ಧೋನಿ ನಿವೃತ್ತಿಯಾಗಬೇಕೆಂದು ಹೇಳಿದ ಪ್ರಮುಖರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೊಹ್ಲಿ ಜನರಿಗೆ ಸ್ವಲ್ಪ ತಾಳ್ಮೆಯಿರಲಿ ಎಂದಿದ್ದಾರೆ.ದೆಹಲಿ ಪಂದ್ಯದಲ್ಲಿ ಅವರು ಸಿಕ್ಸರ್ ಬಾರಿಸಿದಾಗ ಎಲ್ಲರೂ ಹೊಗಳಿದರು. ಆದರೆ ನಂತರ ಒಂದು ಪಂದ್ಯದಲ್ಲಿ ಚೆನ್ನಾಗಿ ಆಡಲಿಲ್ಲ