ಮುಂಬೈ: ಧೋನಿ ಇದೀಗ ಇದ್ದಕ್ಕಿದ್ದಂತೆ ಸಿಡಿಯುವುದಕ್ಕೆ ಕಾರಣ ವಿರಾಟ್ ಕೊಹ್ಲಿಯಂತೆ! ಹಾಗಂತ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ನಾಯಕತ್ವ ತ್ಯಜಿಸಿದ ಮೇಲೆ ಧೋನಿ ಭವಿಷ್ಯದ ಬಗ್ಗೆ ಹಲವು ಹಲವು ರೀತಿಯಲ್ಲಿ ಮಾತನಾಡಿದ್ದರು. ಆದರೆ ಧೋನಿ ಪ್ರತೀ ಪಂದ್ಯದಲ್ಲೂ ಭಾರತದ ಪಾಲಿಗೆ ಆಪತ್ಬಾಂಧವನಾಗುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಕೊಹ್ಲಿ ಧೋನಿ ಮೇಲಿಟ್ಟಿರುವ ಅಪಾರವಾದ ನಂಬಿಕೆ ಎಂದು ಗಂಗೂಲಿ ಹೇಳಿದ್ದಾರೆ.ನಾಯಕನಾಗಿ ಕೊಹ್ಲಿ ಧೋನಿ ಮೇಲೆ ಅಪಾರ ವಿಶ್ವಾಸವಿಟ್ಟರು. ಹೀಗಾಗಿಯೇ