ಚೆನ್ನೈ: ಟೀಂ ಇಂಡಿಯಾ ನಾಯಕತ್ವ ತ್ಯಜಿಸಿ ಧೋನಿ ಅದೆಷ್ಟೋ ಕಾಲವಾಯ್ತು. ಹಾಗಿದ್ದರೂ ನಾಯಕತ್ವ ಮಾತ್ರ ಅವರನ್ನು ಬಿಟ್ಟು ಹೋಗುತ್ತಿಲ್ಲ. ಚೆನ್ನೈಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಧೋನಿ ಸ್ಟಂಪ್ ಹಿಂದುಗಡೆ ನಿಂತು ಮಾತನಾಡಿದ್ದು ಮೈಕ್ರೋಫೋನ್ ನಲ್ಲಿ ದಾಖಲಾಗಿದ್ದು, ಇದಕ್ಕೆ ಪುಷ್ಠಿ ನೀಡಿದೆ. ಗ್ಲೆನ್ ಮ್ಯಾಕ್ಸ್ ವೆಲ್ ಭಾರತಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿರುವಾಗ ಕೊಹ್ಲಿ ವೇಗದ ಬೌಲರ್ ಗಳ ಮೊರೆ ಹೋಗಲು ಯತ್ನಿಸಿದರು. ಆದರೆ ಧೋನಿ ಕೊಹ್ಲಿ ಮನ