ಜೊಹಾನ್ಸ್ ಬರ್ಗ್: ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಸೋತ ಬಳಿಕ ಟೀಂ ಇಂಡಿಯಾದೊಳಗಿನ ಒಗ್ಗಟ್ಟಿನ ಬಗ್ಗೆ ಸಂಶಯ ಮೂಡಿದೆ. ಸರಣಿಗೆ ತಯಾರಿ ನಡೆಸಿರುವ ಕುರಿತಂತೆ ಕೋಚ್ ಮತ್ತು ನಾಯಕನ ಹೇಳಿಕೆಗಳು ಭಿನ್ನವಾಗಿರುವುದು ಇದಕ್ಕೆ ಕಾರಣ. ಮೊನ್ನೆಯಷ್ಟೇ ಕೋಚ್ ರವಿಶಾಸ್ತ್ರಿ ನಾವು ಸರಣಿಗೆ ಸರಿಯಾಗಿ ತಯಾರಾಗಿ ಬಂದಿರಲಿಲ್ಲ. ನಮಗೆ ಕೆಲವು ಅಭ್ಯಾಸ ಪಂದ್ಯಗಳು ಬೇಕಿತ್ತು. ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಕಷ್ಟು ಅಭ್ಯಾಸ ಬೇಕಿತ್ತು ಎಂದಿದ್ದರು.ಆದರೆ ಇಂದಿನ ಪಂದ್ಯಕ್ಕೆ ಮೊದಲು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ