ತಂದೆಯಾಗುತ್ತಿರುವ ಕ್ರಿಕೆಟಿಗ ಕೃಷ್ಣಪ್ಪ ಗೌತಮ್

ದುಬೈ| Krishnaveni K| Last Modified ಬುಧವಾರ, 15 ಸೆಪ್ಟಂಬರ್ 2021 (17:21 IST)
ದುಬೈ: ಕನ್ನಡಿಗ ಕ್ರಿಕೆಟಿಗ ಕೃಷ್ಣಪ್ಪ ಗೌತಮ್-ಅರ್ಚನಾ ದಂಪತಿ ಅಭಿಮಾನಿಗಳೊಂದಿಗೆ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.
Photo Courtesy: Twitter

 
ಟೀಂ ಇಂಡಿಯಾವನ್ನು ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿರುವ ಕೃಷ್ಣಪ್ಪ ಗೌತಮ್ ಈಗ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
 
ಈಗ ಕೃಷ್ಣಪ್ಪ ದಂಪತಿ ತಮಗೆ ಸದ್ಯದಲ್ಲೇ ಮಗುವಾಗುತ್ತಿರುವ ಖುಷಿ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಮುಂದಿನ ವರ್ಷ ಜನವರಿಗೆ ಅರ್ಚನಾಗೆ ಹೆರಿಗೆಯಾಗಲಿದೆ ಎಂಬ ವಿಚಾರವನ್ನು ಕೃಷ್ಣಪ್ಪ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :