ಕೊಲೊಂಬೊ: ಕ್ರಿಕೆಟಿಗ ಧೋನಿಯನ್ನು ಆರಾಧಿಸುವ ಎಂತೆಂತಹಾ ಅಭಿಮಾನಿಗಳಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಅಂತಹದ್ದೇ ಘಟನೆ ಕೊಲೊಂಬೋದಲ್ಲಿ ಅಭ್ಯಾಸ ನಡೆಸುತ್ತಿದ್ದ ಧೋನಿಗೆ ಮತ್ತೊಮ್ಮೆ ಎದುರಾಗಿದೆ. ನಾಲ್ಕನೇ ಏಕದಿನ ಪಂದ್ಯಕ್ಕೆ ನೆಟ್ ನಲ್ಲಿ ಅಭ್ಯಾಸ ನಡೆಸುತ್ತಿದ್ದ ಧೋನಿ ಬಳಿಗೆ ಲಂಕಾ ಮೂಲದ ಅಭಿಮಾನಿಯೊಬ್ಬ ಬಂದಿದ್ದ. ಮೊದಲು ರೋಹಿತ್ ಶರ್ಮಾ ಬಳಿಗೆ ಬಂದ ಆತ ಧೋನಿ ಎಂದು ತಪ್ಪಾಗಿ ತಿಳಿದು ಸೆಲ್ಫೀ ಕೇಳಲು ಬಯಸಿದ್ದ.ಆದರೆ ರೋಹಿತ್ ನೆಟ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಧೋನಿ