Widgets Magazine

ಟಾಲಿವುಡ್ ನಟಿ ಜತೆ ಕ್ರಿಕೆಟಿಗ ಮನೀಶ್ ಪಾಂಡೆ ವಿವಾಹ?!

ಬೆಂಗಳೂರು| Krishnaveni K| Last Modified ಶುಕ್ರವಾರ, 11 ಅಕ್ಟೋಬರ್ 2019 (10:13 IST)
ಬೆಂಗಳೂರು: ಟೀಂ ಇಂಡಿಯಾ ಏಕದಿನ ತಂಡದ ಬ್ಯಾಟ್ಸ್ ಮನ್, ಕನ್ನಡಿಗ ಮನೀಶ್ ಪಾಂಡೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಸುದ್ದಿ ಬಂದಿದೆ.

 
ಸದ್ಯಕ್ಕೆ ಕರ್ನಾಟಕ ಪರ ವಿಜಯ್ ಹಜಾರೆ ಟ್ರೋಫಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಮನೀಶ್ ಸದ್ಯದಲ್ಲೇ ಟಾಲಿವುಡ್ ನಟಿ ಆಶ್ರಿತಾ ಶೆಟ್ಟಿಯನ್ನು ವರಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
 
ಉದಯಮ್ ಎನ್ ಎಚ್ 4,ಇಂದ್ರಜಿತ್ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಆಶ್ರಿತಾ ಜತೆ ಮುಂಬರುವ ಡಿಸೆಂಬರ್ 2 ರಂದು ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಬಂದಿದೆ. ಕಳೆದ ಕೆಲವು ದಿನಗಳಿಂದ ಇಬ್ಬರೂ ಪ್ರೀತಿಸುತ್ತಿದ್ದು ಮುಂಬೈಯಲ್ಲಿ ಇವರ ವಿವಾಹ ನೆರವೇರಲಿದೆ ಎಂಬ ಸುದ್ದಿ ಹಬ್ಬಿದೆ.
ಇದರಲ್ಲಿ ಇನ್ನಷ್ಟು ಓದಿ :