ಮುಂಬೈ: ಶ್ರೀಲಂಕಾ ವಿರುದ್ಧ ಸೀಮಿತ ಓವರ್ ಗಳ ಪಂದ್ಯವಾಡಲು ಟೀಂ ಇಂಡಿಯಾದ ಎರಡನೇ ತಂಡ ಕೊಲೊಂಬೋಗೆ ಪ್ರಯಾಣ ಬೆಳೆಸಲಿದೆ. ಈ ತಂಡದಲ್ಲಿ ಕನ್ನಡಿಗ ಮನೀಶ್ ಪಾಂಡೆಗೂ ಸ್ಥಾನ ಸಿಕ್ಕಿದೆ.ಕಳೆದ ಕೆಲವು ಸಮಯದಿಂದ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗಲು ಪರದಾಡುತ್ತಿದ್ದ ಪಾಂಡೆಗೆ ಈಗ ಕೊನೆಗೂ ಅವಕಾಶವೊಂದು ಸಿಕ್ಕಿದೆ. ಅದನ್ನು ಅವರು ಯಾವ ರೀತಿ ಬಳಸುತ್ತಾರೆ ಎಂದು ನೋಡಬೇಕಿದೆ.ಯಾಕೆಂದರೆ ಈ ಹಿಂದೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿ ಸರಾಸರಿ ಪ್ರದರ್ಶನ ನೀಡಿದ್ದ