Widgets Magazine

ಟಿ20 ಪಂದ್ಯವಾಡುವ ಮಯಾಂಕ್ ಅಗರ್ವಾಲ್ ಕನಸು ಸದ್ಯಕ್ಕೆ ಈಡೇರದು! ಕಾರಣವೇನು ಗೊತ್ತಾ?

ಮುಂಬೈ| Krishnaveni K| Last Modified ಮಂಗಳವಾರ, 19 ನವೆಂಬರ್ 2019 (09:23 IST)
ಮುಂಬೈ: ಕರ್ನಾಟಕ ಮೂಲದ ಟೀಂ ಇಂಡಿಯಾ ಟೆಸ್ಟ್ ಆರಂಭಿಕ ಮಯಾಂಕ್ ಅಗರ್ವಾಲ್ ಗೆ ಸೀಮಿತ ಓವರ್ ಕ್ರಿಕೆಟ್ ಆಡುವ ಕನಸು ಸದ್ಯಕ್ಕೆ ನನಸಾಗದು.

 

ಮಯಾಂಕ್ ಟೆಸ್ಟ್ ನಲ್ಲಿ ಅಮೋಘ ಫಾರ್ಮ್  ಪ್ರದರ್ಶಿಸಿದ್ದರಿಂದ ಸೀಮಿತ ಓವರ್ ಗಳ ಪಂದ್ಯಕ್ಕೂ ಅವರು ಆಯ್ಕೆಯಾಗಬಹುದು ಎಂಬ ಸುದ್ದಿಯಿತ್ತು. ಆದರೆ ಬಿಸಿಸಿಐ ಮೂಲಗಳ ಪ್ರಕಾರ ಸದ್ಯಕ್ಕಿದು ನನಸಾಗದು.
 
ಈಗಾಗಲೇ ಟೀಂ ಇಂಡಿಯಾ ಸೀಮಿತ ಓವರ್ ಗಳ ಪಂದ್ಯಗಳಲ್ಲಿ ರೋಹಿತ್ ಶರ್ಮಾ-ಶಿಖರ್ ಧವನ್ ಖಾಯಂ ಆರಂಭಿಕರಾಗಿದ್ದಾರೆ. ಅವರ ಜತೆಗೆ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಇದ್ದಾರೆ. ಘಟಾನುಘಟಿಗಳ ನಡುವೆ ಮಯಾಂಕ್ ಗೆ ಸ್ಥಾನ ಸಿಗದು. ಅದೂ ಸಾಲದೆಂಬಂತೆ ತಂಡಕ್ಕೆ ಆಯ್ಕೆಯಾಗಬೇಕಾದರೂ ಮಯಾಂಕ್ ಟಿ20 ಪಂದ್ಯಗಳಲ್ಲಿ ಆಡಿ ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕು. ಹೀಗಾಗಿ ಮುಂದಿನ ಐಪಿಎಲ್ ಅವರ ಪಾಲಿಗೆ ಮಹತ್ವದ್ದಾಗಲಿದೆ. ಈ ಐಪಿಎಲ್ ಕೂಟದಲ್ಲಿ ಮಯಾಂಕ್ ರನ್ ಗಳಿಸಿದರೆ ಮುಂದೊಂದು ದಿನ ಅವರಿಗೆ ಸೀಮಿತ ಓವರ್ ಗಳ ತಂಡಕ್ಕೆ ಅವಕಾಶದ ಬಾಗಿಲು ತೆರೆಯಲಿದೆ.
ಇದರಲ್ಲಿ ಇನ್ನಷ್ಟು ಓದಿ :