ಮುಂಬೈ: ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡವನ್ನೊಳಗೊಂಡ ತ್ರಿಕೋನ ಟಿ20 ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು, ಸಾಕಷ್ಟು ಯುವ ಪ್ರತಿಭೆಗಳಿಗೆ ಆಯ್ಕೆಗಾರರು ಅವಕಾಶ ನೀಡಿದ್ದಾರೆ. ತಮಿಳುನಾಡಿನ ವಿಜಯ್ ಶಂಕರ್, ಡೆಲ್ಲಿ ಡ್ಯಾಶರ್ ರಿಷಬ್ ಪಂತ್, ದೀಪಕ್ ಹೂಡಾ ಇತ್ಯಾದಿ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಬಿಸಿಸಿಐ ಒಳ್ಳೆಯ ಕೆಲಸವನ್ನೇ ಮಾಡಿದೆ.ಸಾಮಾನ್ಯವಾಗಿ ರಣಜಿ ಸೇರಿದಂತೆ ದೇಶೀಯ ಟೂರ್ನಿಯಲ್ಲಿ ಗಮನ ಸೆಳೆದ ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ಪರಿಗಣಿಸಲಾಗುತ್ತದೆ. ಆದರೆ ಕರ್ನಾಟಕದ