ಪ್ರಶ್ನೆ ಕೇಳಿದ ಪತ್ರಕರ್ತನಿಗೇ ಶಾಕ್ ಕೊಟ್ಟ ಮಯಾಂಕ್ ಅಗರ್ವಾಲ್!

ಇಂಧೋರ್, ಶನಿವಾರ, 16 ನವೆಂಬರ್ 2019 (09:22 IST)

ಇಂಧೋರ್: ಡಬಲ್ ಸೆಂಚುರಿ ಬಾರಿಸಿದ ಖುಷಿಯಲ್ಲಿರುವ ಟೀಂ ಇಂಡಿಯಾ ಆರಂಭಿಕ ಮಯಾಂಕ್ ಅಗರ್ವಾಲ್ ಕೊನೆಗೆ ಪತ್ರಕರ್ತರ ಮುಂದೆಯೂ ತಾವೆಷ್ಟು ಚಾಲಾಕಿ ಎಂದು ತೋರಿಸಿಕೊಂಡಿದ್ದಾರೆ.


 
ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ನ ದ್ವಿತೀಯ ದಿನ ದ್ವಿಶತಕ ಗಳಿಸಿದ ಮಯಾಂಕ್ ಐದೇ ಇನಿಂಗ್ಸ್ ಅವಧಿಯಲ್ಲಿ ಎರಡು ಬಾರಿ ದ್ವಿಶತಕ ಗಳಿಸಿದ ದಾಖಲೆ ಮಾಡಿದ್ದರು.
 
ಈ ಬಗ್ಗೆ ಪತ್ರಕರ್ತರೊಬ್ಬರು ಮಯಾಂಕ್ ರನ್ನು ಇಂತಹ ಅದ್ಭುತ ರನ್ ಗಳಿಸಿದ ದಿನ ಸಂಜೆ ವೇಳೆ ಹೋಟೆಲ್ ರೂಂನಲ್ಲಿ ಕುಳಿತು ನೀವು ಏನು ಮಾಡುತ್ತೀರಿ? ನಿಮ್ಮ ಆಟದ ಹೈಲೈಟ್ ನೋಡ್ತೀರಾ? ಇಲ್ಲಾ ಯಾವುದಾದರೂ ಸಿನಿಮಾ ನೋಡಿ ರಿಲ್ಯಾಕ್ಸ್ ಆಗ್ತೀರಾ ಎಂದು ಕೇಳಿದರು.
 
ಇದಕ್ಕೆ ಅಷ್ಟೇ ತಮಾಷೆಯಾಗಿ ಮಯಾಂಕ್ ಉತ್ತರಿಸಿದ್ದಾರೆ. ‘ಮಯಾಂಕ್ ಪಬ್ಜಿ ಗೇಮ್ ಆಡ್ತಾರೆ’ ಎಂದು ತಮಾಷೆಯಾಗಿ ಮಯಾಂಕ್ ಉತ್ತರಿಸಿದರೆ ಅಲ್ಲಿ ನೆರೆದಿದ್ದ ವರದಿಗಾರರಿಗೆ ಶಾಕ್ ಜತೆಗೆ ನಗುವೋ ನಗು.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್ ಹರಾಜು: ಯುವರಾಜ್, ರಾಬಿನ್ ಉತ್ತಪ್ಪರನ್ನು ಕೈ ಬಿಟ್ಟ ಫ್ರಾಂಚೈಸಿಗಳು

ಮುಂಬೈ: ಈ ವರ್ಷದ ಐಪಿಎಲ್ ಹರಾಜು ಪ್ರಕ್ರಿಯೆಗೆ ಮೊದಲು ಆಯಾ ಫ್ರಾಂಚೈಸಿಗಳು ಕೆಲವು ಆಟಗಾರರನ್ನು ತಂಡದಿಂದ ...

news

ಅನಿಲ್ ಕುಂಬ್ಳೆ ಕನ್ನಡ ಕವನ ವಾಚನಕ್ಕೆ ಫಿದಾ ಆದ ಕನ್ನಡಿಗರು

ಬೆಂಗಳೂರು: ಸ್ಪಿನ್ ಮೋಡಿಗಾರ ಅನಿಲ್ ಕುಂಬ್ಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟೇ ಹೆಸರು ಮಾಡಿದ್ದರೂ ...

news

ಕೊನೆಗೂ ಅಭ್ಯಾಸಕ್ಕಿಳಿದ ಧೋನಿ

ರಾಂಚಿ: ವಿಶ್ವಕಪ್ ನಂತರ ಕ್ರಿಕೆಟ್ ಮೈದಾನದಿಂದ ದೂರವೇ ಉಳಿದಿದ್ದ ಹಿರಿಯ ವಿಕೆಟ್ ಕೀಪರ್ ಧೋನಿ ಮತ್ತೆ ...

news

ಭಾರತ-ಬಾಂಗ್ಲಾ ಟೆಸ್ಟ್: ದ್ವಿಶತಕ ಗಳಿಸಿಯೂ ವಿರಾಟ್ ಕೊಹ್ಲಿ ಕನಸು ಈಡೇರಿಸದ ಮಯಾಂಕ್ ಅಗರ್ವಾಲ್!

ಇಂಧೋರ್: ಅದ್ಭುತ ಫಾರ್ಮ್ ನಲ್ಲಿರುವ ಮಯಾಂಕ್ ಅಗರ್ವಾಲ್ ಐದೇ ಇನಿಂಗ್ಸ್ ಅವಧಿಯಲ್ಲಿ ಮತ್ತೊಂದು ದ್ವಿಶತಕ ...