ಸಿಕ್ಸರ್ ನಿಂದಲೇ ಮನಸ್ಸು ಗೆದ್ದ ಮಯಾಂಕ್ ಅಗರ್ವಾಲ್

ಬ್ರಿಸ್ಬೇನ್| Krishnaveni K| Last Modified ಸೋಮವಾರ, 18 ಜನವರಿ 2021 (08:14 IST)
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಡುವ ಬಳಗದಲ್ಲಿ ಅವಕಾಶ ಪಡೆದ ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಸಿಕ್ಸರ್ ನಿಂದಲೇ ಎಲ್ಲರ ಮನಸ್ಸು ಗೆದ್ದಿದ್ದಾರೆ.
 

ಮೂರನೇ ಟೆಸ್ಟ್ ಪಂದ್ಯದಲ್ಲಿ ಕಳಪೆ ಫಾರ್ಮ್ ನಿಂದಾಗಿ ಹೊರಗುಳಿದಿದ್ದ ಮಯಾಂಕ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಅವಕಾಶ ಪಡೆದಿದ್ದರು. ನಿನ್ನೆ ತಮ್ಮ 38 ರನ್ ಗಳ ಇನಿಂಗ್ಸ್ ನಲ್ಲಿ ಮಯಾಂಕ್ 102 ಮೀಟರ್ ಉದ್ದದ ಮನಮೋಹಕ ಸಿಕ್ಸರ್ ಸಿಡಿಸಿದ್ದು ನೆಟ್ಟಿಗರ ಮನಸ್ಸು ಗೆದ್ದಿದೆ. ಮಯಾಂಕ್ ಈ ಸಿಕ್ಸರ್ ಮೂಲಕ ತಮ್ಮ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ ಎಂದು ನೆಟ್ಟಿಗರು ಬಣ್ಣಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :