ಡೆಲ್ಲಿ ಡೇರ್ಡೆವಿಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಮೂವರು ಸ್ಪಿನ್ನರುಗಳನ್ನು ಪ್ರಯೋಗಿಸುವ ನಿರ್ಧಾರವು ತಿರುಗೇಟು ನೀಡಿತು. ಕ್ರುನಾಲ್ ಪಾಂಡ್ಯ ಬ್ಯಾಟಿಂಗ್ ಬಡ್ತಿ ಪಡೆದು ಸ್ಪಿನ್ನರುಗಳ ಎಸೆತಗಳನ್ನು ಮನಬಂದಂತೆ ದಂಡಿಸಿ 37 ಎಸೆತಗಳಲ್ಲಿ 86 ರನ್ ಬಾರಿಸಿದರು. ಇದು ಮುಂಬೈ ಇಂಡಿಯನ್ಸ್ 80 ರನ್ ಜಯಸಾಧಿಸಲು ನೆರವಾಯಿತು.