ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟಿಗರು ಸ್ಲೆಡ್ಜಿಂಗ್ ಮಾಡುವುದರಲ್ಲಿ ನಿಸ್ಸೀಮರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ವೇಗಿ ಮಿಚೆಲ್ ಸ್ಟಾರ್ಕ್ ಮಾತು ಮಾತ್ರ ಮಿತಿ ಮೀರಿದೆ. ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಲೆಗೇ ಬಾಲ್ ಎಸೆಯುತ್ತೇನೆ ಎಂದು ಸ್ಟಾರ್ಕ್ ಹೇಳಿಕೊಂಡಿದ್ದಾರೆ. ನಾನು ಅಶ್ವಿನ್ ಮುಂದಿನ ಬಾರಿ ಆಸ್ಟ್ರೇಲಿಯಾ ಪ್ರವಾಸ ಮಾಡುವುದನ್ನೇ ಕಾಯುತ್ತಿದ್ದೇನೆ. ಈ ಸರಣಿಗೆ ಮೊದಲು ಅವರ ಬಗ್ಗೆ ಬೇಕಾದಷ್ಟು ಹೊಗಳಿಕೆ ಕೇಳಿದ್ದೇವೆ. ಆದರೆ ನಾವು ಎಲ್ಲದನ್ನೂ ಮೀರಿ ನಡೆದಿದ್ದೇವೆ. ನನ್ನ ಗುರಿ