ಹೈದರಾಬಾದ್: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಜತೆ ವ್ಯಕ್ತಿಯೊಬ್ಬ ಟ್ವಿಟರ್ ನಲ್ಲಿ ಮುಜುಗರ ತರುವಂತಹ ಪ್ರಶ್ನೆ ಕೇಳಲು ಹೋಗಿ ಖಡಕ್ ಉತ್ತರ ಪಡೆದಿದ್ದಾನೆ. ಆಗಿದ್ದೇನು?: ಯಾವುದೋ ಕಾರ್ಯಕ್ರಮಕ್ಕೆ ತೆರಳಿದ್ದ ಮಿಥಾಲಿ ರಾಜ್, ಸಹ ಆಟಗಾರ್ತಿ ವೇದಾ ಕೃಷ್ಣಮೂರ್ತಿ, ಮಾಜಿ ಆಟಗಾರ್ತಿಯರಾದ ನೋಶಿನ್ ಆಲ್ ಖಾದಿರ್ ಮತ್ತು ಮಮತಾ ಮಾಬೆನ್ ಜತೆ ಫೋಟೋ ತೆಗೆಸಿಕೊಂಡು ಟ್ವಿಟರ್ ನಲ್ಲಿ ಹಾಕಿದ್ದರು.ಇದರ ಕೆಳಗೆ ವಿಶೇಷವಾದ ಮಹಿಳೆಯರೊಂದಿಗಿರುವುದು ಅಮೂಲ್ಯ ಕ್ಷಣ