Widgets Magazine

ಎದೆ ಕಾಣುವ ಉಡುಪು ತೊಟ್ಟು ಟೀಕೆಗೊಳಗಾದ ಮಿಥಾಲಿ ರಾಜ್

ನವದೆಹಲಿ| Krishnaveni| Last Modified ಗುರುವಾರ, 7 ಸೆಪ್ಟಂಬರ್ 2017 (09:30 IST)
ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತೆ ಉಡುಪಿನ ವಿಷಯಕ್ಕೆ ಟ್ವಿಟರ್ ನಲ್ಲಿ ಟೀಕೆಗೊಳಗಾಗಿದ್ದಾರೆ. ಹಿಂದೊಮ್ಮೆ ಕಂಕುಳಲ್ಲಿ ಬೆವರು ಮೂಡಿದ ಉಡುಪು ತೊಟ್ಟದ್ದಕ್ಕೆ ಟ್ವಿಟರಿಗರೊಬ್ಬರು ಅವರನ್ನು ಟೀಕಿಸಿದ್ದರು.
 
ನಾಲ್ವರು ಹುಡುಗಿಯರೊಂದಿಗೆ ಫೋಟೋ ಶೂಟ್ ಒಂದರ ಸಂದರ್ಭದಲ್ಲಿ ಮಿಥಾಲಿ ತೆಗೆಸಿಕೊಂಡ ಸೆಲ್ಫೀ ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿದ್ದರು. ಆದರೆ ಈ ಫೋಟೋದಲ್ಲಿ ಅವರ ಎದೆ ಸೀಳು ದರ್ಶನವಾಗುತ್ತಿತ್ತು.
 
ಇದನ್ನು ಗುರುತಿಸಿದ ಕೆಲವು ಹಿಂಬಾಲಕರು ‘ಮ್ಯಾಡಮ್ ನಿಮ್ಮನ್ನು ನಾವು ಮಾದರಿ ಹೆಣ್ಣೆಂದು ಗೌರವಿಸುತ್ತೇವೆ. ದಯವಿಟ್ಟು ಈ ಫೋಟೋವನ್ನು ಡಿಲೀಟ್ ಮಾಡಿ’ ಎಂದು ಮನವಿ ಮಾಡಿದ್ದಾರೆ. ಇನ್ನು ಕೆಲವರು ಎಂತಹ ಉಡುಪು ಹಾಕಬೇಕೆಂಬುದು ಆಕೆಯ ನಿರ್ಧಾರ. ನಿಮ್ಮ ನೋಡುವ ದೃಷ್ಟಿ ಸರಿ ಇರಬೇಕು ಎಂದು ಮಿಥಾಲಿ ಪರವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಮಿಥಾಲಿಯಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
 
ಇದನ್ನೂ ಓದಿ.. ‘ಹೌದು ಉಗ್ರ ಸಂಘಟನೆಗಳು ನಮ್ಮಲ್ಲೇ ಇದ್ದಾರೆ.. ಏನಿವಾಗ?’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :