ಮುಂಬೈ: ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ತೆರಳುವಾಗ ಭಾರತ ತಂಡ ಹೋಗಿದ್ದೂ ಯಾರಿಗೂ ಗೊತ್ತಾಗಲೇ ಇಲ್ಲ. ಆದರೆ ಬರುವಾಗ ಹೀರೋಗಳಾಗಿ ಬಂದ ಕ್ರಿಕೆಟ್ ಆಟಗಾರ್ತಿಯರು ತಮ್ಮ ಗಮ್ಯ ತಲುಪಲು ಕಷ್ಟಪಡುವಂತಾಯಿತು.ಮಹಿಳಾ ಕ್ರಿಕೆಟರುಗಳಾದ ಮಿಥಾಲಿ ರಾಜ್, ಹರ್ಮನ್ ಪ್ರೀತ್ ಕೌರ್, ಜೂಲನ್ ಗೋಸ್ವಾಮಿ, ಪೂನಂ ರಾವತ್, ದೀಪ್ತಿ ಶರ್ಮಾ, ಸ್ಮೃತಿ ಮಂದಣ್ಣ, ಶಿಖಾ ಪಾಂಡೆ, ಸುಷ್ಮಾ ವರ್ಮಾ ಇಂದು ಬೆಳಗಿನ ಜಾವ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಉಳಿದ ಆಟಗಾರ್ತಿಯರು ಇಂದು