ತಮಿಳು ಬರಲ್ಲ ಎಂದು ಛೇಡಿಸಿದ ಅಭಿಮಾನಿಯ ಚಳಿ ಬಿಡಿಸಿದ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್

ಮುಂಬೈ, ಬುಧವಾರ, 16 ಅಕ್ಟೋಬರ್ 2019 (10:34 IST)

ಮುಂಬೈ: ಭಾರತೀಯ ಮಹಿಳಾ ಕ್ರಿಕೆಟ್ ರಂಗದ ಸಚಿನ್ ತೆಂಡುಲ್ಕರ್ ಎಂದೇ ಕರೆಯಿಸಿಕೊಳ್ಳುವ ಮಿಥಾಲಿ ರಾಜ್ ಕೇವಲ ಆಟದಲ್ಲಿ ಮಾತ್ರ ಜಾಣೆಯಲ್ಲ, ಟೀಕಿಸಿದವರಿಗೂ ತಕ್ಕ ಉತ್ತರ ಕೊಡುವಲ್ಲಿ ಹಿಂದೆಮುಂದೆ ನೋಡಲ್ಲ ಎಂಬುದು ಹಲವು ಬಾರಿ ಸಾಬೀತಾಗಿದೆ.


 
ಇದೀಗ ಮತ್ತೆ ಮಿಥಾಲಿ ಟೀಕಿಸಿದವನಿಗೆ ತಕ್ಕ ಎದಿರೇಟು ಕೊಡುವ ಮೂಲಕ ಅದನ್ನು ಸಾಬೀತು ಮಾಡಿದ್ದಾರೆ. ದ.ಆಫ್ರಿಕಾ ವಿರುದ್ಧ 3-0 ಅಂತರದಿಂದ ಏಕದಿನ ಸರಣಿ ಗೆಲ್ಲಿಸಿಕೊಟ್ಟ ಖುಷಿಯಲ್ಲಿದ್ದ ನಾಯಕಿ ಮಿಥಾಲಿ ರಾಜ್ ರನ್ನು ಅಭಿಮಾನಿಯೊಬ್ಬ ತಮಿಳು ಭಾಷೆ ಮಾತನಾಡಲ್ಲ ಎಂದು ಟ್ವಿಟರ್ ನಲ್ಲಿ ಕೆಣಕಿದ್ದಾನೆ.
 
ಮಿಥಾಲಿ ಯಾವತ್ತೂ ತೆಲುಗು, ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಮಾತನಾಡುತ್ತಾರೆ. ಮಾತೃಭಾಷೆ ತಮಿಳು ಮಾತನಾಡಲ್ಲ ಎಂದು ಕೆಣಕಿದ್ದಾನೆ. ಈತನಿಗೆ ತಕ್ಕ ಎದಿರೇಟು ಕೊಟ್ಟಿರುವ ಮಿಥಾಲಿ ಕೆಲವು ಸಾಲುಗಳನ್ನು ತಮಿಳಿನಲ್ಲೇ ಬರೆದಿದ್ದಾರೆ. ಜತೆಗೆ ನಾನು ಎಲ್ಲಕ್ಕಿಂತ ಮೊದಲು ಹೆಮ್ಮೆಯ ಭಾರತೀಯಳು. ನನ್ನ ಪ್ರತೀ ಪೋಸ್ಟ್ ಗೂ ಟೀಕೆ ಮಾಡುವ ನಿಮ್ಮಂತಹವರೇ ನನಗೆ ಹೆಚ್ಚು ಬೆಳೆಯಲು ಸ್ಪೂರ್ತಿ ಎಂದು ತಿರುಗೇಟು ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಅಮಿತ್ ಶಾ ಭೇಟಿಯಾದ ಗಂಗೂಲಿ: ರೂಮರ್ ಗಳಿಗೆ ಬ್ರೇಕ್ ಹಾಕಿದ ದಾದ

ಮುಂಬೈ: ಬಿಸಿಸಿಐನ ನಿಯೋಜಿತ ಅಧ್ಯಕ್ಷ ಸೌರವ್ ಗಂಗೂಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ...

news

ಸೌರವ್ ಗಂಗೂಲಿ ಇರುವಾಗ ಭಯವೇತಕೆ ಎಂದ ವೀರೇಂದ್ರ ಸೆಹ್ವಾಗ್

ಮುಂಬೈ: ಟೀಂ ಇಂಡಿಯಾದಲ್ಲಿ ವೀರೇಂದ್ರ ಸೆಹ್ವಾಗ್ ಮಿಂಚುವುದಕ್ಕೆ ಪ್ರಮುಖ ಕಾರಣವೇ ಸೌರವ್ ಗಂಗೂಲಿ. ...

news

ವಿರಾಟ್ ಕೊಹ್ಲಿಯಲ್ಲಿ ಶೊಯೇಬ್ ಅಖ್ತರ್ ಕಂಡ ‘ಪಾಕಿಸ್ತಾನಿ’ ಅಂಶ ಯಾವುದು ಗೊತ್ತಾ?!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕ್ರಮಣಕಾರಿ ಆಟಕ್ಕೆ ಹೆಸರು. ಅವರು ಇತ್ತೀಚೆಗೆ ಟೆಸ್ಟ್ ...

news

ಮೊದಲ ಪರೀಕ್ಷೆ ಪಾಸಾದ ‘ಅಧ್ಯಕ್ಷ’ ಸೌರವ್ ಗಂಗೂಲಿ

ಮುಂಬೈ: ಬಿಸಿಸಿಐ ನೂತನ ಅಧ್ಯಕ್ಷರಾಗಿ ನಿಯೋಜನೆಗೊಳ್ಳಲಿರುವ ಮಾಜಿ ನಾಯಕ ಸೌರವ್ ಗಂಗೂಲಿ ಮೊದಲ ಹೆಜ್ಜೆ ಪಾಸ್ ...