ಹೈದರಾಬಾದ್: ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಗೆ ಈಗ ಎಲ್ಲೆಡೆಯಿಂದ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಇದೀಗ ಭಾರತ ಮಹಿಳಾ ತಂಡದ ನಾಯಕಿ ದುಬಾರಿ ಬಿಎಂಡಬ್ಲ್ಯು ಕಾರಿನ ಒಡತಿಯಾಗಿದ್ದಾರೆ.ಉತ್ತಮ ಸಾಧನೆ ಮಾಡಿದ ಕ್ರೀಡಾಳುಗಳನ್ನು ಗುರುತಿಸಿ ಸನ್ಮಾನಿಸುವ ಹೈದರಾಬಾದ್ ಮೂಲದ ಉದ್ಯಮಿ ಹಾಗೂ ಬ್ಯಾಡ್ಮಿಂಟನ್ ಸಂಸ್ಥೆ ಉಪಾಧ್ಯಕ್ಷ ಚಾಮುಂಡೇಶ್ವರ ನಾಥ್ ಮಿಥಾಲಿಗೆ ದುಬಾರಿ ಕಾರಿನ ಕೀ ಹಸ್ತಾಂತರಿಸಿದರು.ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಿಥಾಲಿ ಕಾರು ಉಡುಗೊರೆಯಾಗಿ