ಮುಂಬೈ: ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾತ್ರಿ ವೇಳೆ ಟ್ವೀಟ್ ಮಾಡಿ ಶುಭಾಷಯ ಕೋರಿದ್ದಕ್ಕೆ ಟ್ರೋಲ್ ಮಾಡಿದ ವ್ಯಕ್ತಿಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಮಿಥಾಲಿ ರಾಜ್ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ.ಮಿಥಾಲಿ ರಾಜ್ ತಡ ರಾತ್ರಿ ವಿಶ್ ಮಾಡಿದ್ದು ನೋಡಿ ವ್ಯಕ್ತಿಯೊಬ್ಬ ಸ್ವಾತಂತ್ರ್ಯ ದಿನ ಯಾವತ್ತೋ ಕಳೆದುಹೋಯಿತು ಮೇಡಂ. ನೀವು ಒಬ್ಬ ಸೆಲೆಬ್ರಿಟಿಯಾಗಿ ಇಷ್ಟು ತಡವಾಗಿ ವಿಶ್ ಮಾಡುವುದು ಸರಿಯಲ್ಲ ಎಂದು ಟ್ವೀಟ್ ಮಾಡಿದ್ದ.ಇದಕ್ಕೆ ಟ್ವೀಟ್ ಮೂಲಕವೇ ಮಿಥಾಲಿ ತಿರುಗೇಟು ಕೊಟ್ಟಿದ್ದಾರೆ.