ದುಬೈ: ಇತ್ತೀಚೆಗೆ ನಡೆದ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಎಲ್ಲರೂ ಹುಬ್ಬೇರುವಂತೆ ತಂಡವನ್ನು ಫೈನಲ್ ಗೇರಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಐಸಿಸಿ ಬಿಡುಗಡೆ ಮಾಡಿರುವ ವಿಶ್ವ ಇಲೆವೆನ್ ತಂಡದ ನಾಯಕಿಯಾಗಿದ್ದಾರೆ. ಒತ್ತಡದ ಸನ್ನಿವೇಶಗಳಲ್ಲೂ ಕೂಲ್ ಆಗಿ ತಂಡವನ್ನು ನಿಭಾಯಿಸಿದ, ಫೈನಲ್ ನಲ್ಲಿ ಕೊನೆಯವರೆಗೂ ಹೋರಾಡುವ ಕೆಚ್ಚು ತೋರಿದ ಭಾರತೀಯ ನಾಯಕಿಗೆ ಸಹಜವಾಗಿಯೇ ಈ ಗೌರವ ಸಂದಿದೆ. ಇದಲ್ಲದೆ ವೈಯಕ್ತಿಕವಾಗಿಯೂ ಮಿಥಾಲಿ ಈ ಟೂರ್ನಿಯಲ್ಲಿ 403